ಬೆಂಗಳೂರು ವಾರಾಂತ್ಯದಲ್ಲಿ ಭಾರಿ ಅಪಾಯಕಾರಿ...! ಎಂದ ಅಧಿಕೃತ ಅಂಕಿ ಅಂಶಗಳು...!
23 Apr, 2024
ಬೆಂಗಳೂರು : ಬೆಂಗಳೂರು ಬೆಳೆಯುತ್ತಿದೆ. ಇಲ್ಲಿನ ಸಂಚಾರ ವ್ಯವಸ್ಥೆಯನ್ನು ಎಷ್ಟೆ ಕಟ್ಟುನಿಟ್ಟಿನಲ್ಲಿ ಪಾಲೆನೆ ಮಾಡಿದರೂ ಅವಘಡಗಳು ಆಗಾಗ ನಡೆಯುತ್ತಲೇ ಇರುತ್ತವೆ . ವಾಸ್ತವದಲ್ಲಿ ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆ ದೇಶದಲ್ಲಿಯೇ ಮಾದರಿಯಾಗಿದೆ. ಆದರೂ ನಮ್ಮಲ್ಲಿ ವಾರಾಂತ್ಯಕ್ಕೆ ಆಗುವ ಅವಘಡಗಳಿಗೆ ಎಣೆಯೇ ಇಲ್ಲದಂತಾಗಿದೆ. ವಾರಾಂತ್ಯ ಬಂತು ಎಂದರೆ ಟ್ರಾಫಿಕ್ ಪೊಲೀಸ್ರಿಗೆ ಹೊಸ ರೀತಿಯ ತಲೆನೋವು ಪ್ರಾರಂಭವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಜನರು ಹಾಗೇಯೆ ವಾಹನಗಳ ಸಂಖ್ಯೆಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಕಷ್ಟು ಅಪಘಾತ ಪ್ರಕರಣಗಳು ಸಹ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗಿದೆ. ಇನ್ನೂ ಬೆಂಗಳೂರಿನ ವಾರಾಂತ್ಯದ ಅಪಘಾತಗಳ ಗ್ರಾಫ್ ನೋಡದರೆ ಭಯ ಹುಟ್ಟುವಂತಿದೆ. ಕಳೆದ ವರ್ಷಕ್ಕಿಂತ ಗಣನೀಯ ಪ್ರಮಾಣದಲ್ಲಿ ರಸ್ತೆ ಅಪಘಾತಗಳು ಸಂಭವಿಸಿದೆ. ಮಹಾನಗರದಲ್ಲಿ ವಾರದ ಇತರ ದಿನಗಳಿಗೆ ಹೊಲಿಸಿದರೆ ವಾರಾಂತ್ಯದಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚಾಗುತ್ತಿವೆ ಎನ್ನುವುದನ್ನು ಡೇಟಾ ಖಾತ್ರಿ ಪಡಿಸುತ್ತಿದೆ.
ವಾದರದ ದಿನಗಳಲ್ಲಿ ಅದರಲ್ಲಿಯೂ ಕಚೇರಿ ತೆರಳುವ ಹಾಗೂ ವಾಪಸ್ ಬರುವ ಸಮಯದಲ್ಲಿ ಐಟಿ ಸಿಟಿಯಲ್ಲಿ ಟ್ರಾಫಿಕ್ ಹೆಚ್ಚಾಗಿ ಇರುವುದು ಮಾಮೂಲು. ಆದರೆ, ರಸ್ತೆ ಅಪಘಾತಗಳ ಕುರಿತು ನೋಡಿದಾಗ ವಾರದ ದಿನಗಳಲ್ಲಿ ಅಷ್ಟಾಗಿ ಎಕ್ಸಿಡೆಂಟ್ಗಳು ನಡೆದಿರುವುದಿಲ್ಲ ಭಾನುವಾರ ಮತ್ತು ಶನಿವಾರ ಅತಿ ಹೆಚ್ಚು ಮಾರಣಾಂತಿಕ ಅಪಘಾತಗಳು ನಡೆಯುತ್ತಿವೆ. ಇನ್ನೂ ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿಅಂಶಗಳು ಸಹ ಇದನ್ನೆ ಪ್ರತಿಪಾದಿಸುತ್ತಿದೆ. ಶನಿವಾರ ಮತ್ತು ಭಾನುವಾರದಂದು ಅತಿ ಹೆಚ್ಚು ಅಪಘಾತಗಳು ಬೆಂಗಳೂರು ಮಹಾನಗರದ ಸುತ್ತ ಮುತ್ತ ಸಂಭವಿದ ಬಗ್ಗೆ ವರದಿ ಆಗುತ್ತಿದೆ ಎನ್ನುವುದಾಗಿ ಹೇಳುತ್ತವೆ.

ಒಂದು ಲೇಕ್ಕಾಚಾರದ ಪ್ರಕಾರ ಕಳೆದ ವರ್ಷಪೂರ್ತಿಯಲ್ಲಿ ನಡೆದಿರುವ 883 ಮಾರಣಾಂತಿಕ ಅಪಘಾತಗಳಲ್ಲಿ ಶೇ. 32 ಕ್ಕಿಂತ ಹೆಚ್ಚು ಅಪಘಾತಗಳು ವಾರಾಂತ್ಯದಲ್ಲಿಯೇ ನಡೆದಿವೆ. 2022 ಕ್ಕೆ ಹೋಲಿಸಿದರೆ, ಭಾನುವಾರದಂದು ರಸ್ತೆ ಅಪಘಾತದಿಂದ ಆಗಿರುವ ಸಾವಿನ ಸಂಖ್ಯೆ 115 ರಿಂದ 152 ಕ್ಕೆ ಏರಿದೆ. ಆದರೆ, ಶನಿವಾರದಂದು ಸಾವುಗಳು 103 ರಿಂದ 133 ಕ್ಕೆ ಏರಿಕೆಯಾಗಿದೆ. ಇದು ಸುಮಾರು 30% ರಷ್ಟು ಹೆಚ್ಚಾಗಿದೆ.
ಕಳೆದ ವರ್ವದ ಲೆಕ್ಕಾಚಾರದಂತೆ ವಾರದ ಇತರ ದಿನಗಳಲ್ಲಿ ಸರಾಸರಿ ತಲಾ 120 ಮಾರಣಾಂತಿಕ ಅಪಘಾತಗಳು ನಡೆದಿವೆ. ಆದರೆ ವಾರಾಂತ್ಯಗಲ್ಲಿ ನಗರದಲ್ಲಿ ವಾಹನ ಸವಾರರು ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಕಳೆದ ವರ್ಷ ʻಜಾನ್ಸ್ ಹಾಪ್ಕಿನ್ಸ್ ಇಂಟರ್ನ್ಯಾಷನಲ್ ಇಂಜುರಿ ರಿಸರ್ಚ್ ಯೂನಿಟ್ʼ ಮತ್ತು ʻನಿಮ್ಹಾನ್ಸ್ʼ ನಡೆಸಿದ Status Summary Report 2022: Road Safety Risk Factors ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಪ್ರಕಾರ ವಾರದ ದಿನಗಳಿಗಿಂತ ವಾರಾಂತ್ಯದಲ್ಲಿ ನಗರದ ರಸ್ತೆಗಳಲ್ಲಿ ಕಡಿಮೆ ಟ್ರಾಫಿಕ್ ಇರುವುದರಿಂದ ವಾಹನ ಸವಾರರು ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಲು ಅವಕಾಶ ಸಿಗುತ್ತದೆ. ಇನ್ನೂ ವಾರಾಂತ್ಯದಲ್ಲಿ, ಜನರು ಬಿಡುವಿನ ಚಟುವಟಿಕೆಗಳಿಗಾಗಿ ತಿರುಗಾಡುತ್ತಾರೆ ಮತ್ತು ಆದ್ದರಿಂದ ಕಡಿಮೆ ಜಾಗ್ರತೆ ವಹಿಸುತ್ತಾರೆ. ರಸ್ತೆಗಳಲ್ಲಿ ಕಡಿಮೆ ಟ್ರಾಫಿಕ್ ಇರುವ ಕಾರಣ ಜನರು ತಮ್ಮ ವೇಗದಲ್ಲಿ ಬದಲಾವಣೆ ಮಾಡಿ ಮನ ಬಂದಂತೆ ವಾಹನ ಚಾಲನೆ ಮಾಡಲಾಗುತ್ತಿದೆ. ಇನ್ನೂ ಮಧ್ಯ ಪಾನಮಾಡಿ ವಾಹನ ಚಲಾಯಿಸುವುದು, ಮಾದಕ ದ್ರವ್ಯ ಸೇವನೆ, ದುಡುಕಿನ ಚಾಲನೆ ಮುಂತಾದ ಅನೇಕ ಅಪಾಯಕಾರಿ ಅಂಶಗಳೂ ಇದರಲ್ಲಿ ಒಳಗೊಂಡಿವೆ" ಎಂದು ಈ ಗಾಗಲೇ ವರದಿ ಸಿದ್ಧಪಡಿಸಿದ ವರದಿಯಲ್ಲಿ ದಾಖಲಾಗಿದೆ.

ಕನಕಪುರ, ಬಳ್ಳಾರಿ ರಸ್ತೆಯಲ್ಲಿ ಹೆಚ್ಚು ಅಪಘಾತ ಗ್ರಾಮೀಣ ಭಾಗಗಳ ರಸ್ತೆಗಳಲ್ಲಿ ಮತ್ತು ಹೊರವಲಯಕ್ಕೆ ಹೋಗುವ ಕನಕಪುರ ರಸ್ತೆ ಅಥವಾ ಬಳ್ಳಾರಿ ರಸ್ತೆಯಂತಹ ಕಾರಿಡಾರ್ಗಳಲ್ಲಿ ಈ ಅಪಘಾತಗಳು ಹೆಚ್ಚು ಸಾಮಾನ್ಯವಾಗಿದೆ. ವಾರಾಂತ್ಯದಲ್ಲಿ ಹೊರಗೆ ಪ್ರಯಾಣಿಸುವ ಜನರು ಲೇನ್ ಶಿಸ್ತು ಮತ್ತು ಸೈನ್ಬೋರ್ಡ್ಗಳ ಬಗ್ಗೆ ಗಮನ ಹರಿಸುವುದಿಲ್ಲ. ಜೊತೆಗೆ ವೇಗವಾಗಿ ಓಡಾತ್ತಿರುತ್ತಾರೆ. ಹೊರವಲಯಕ್ಕೆ ಹೋಗುತ್ತಿದ್ದಂತೆ, ಸೀಟ್ ಬೆಲ್ಟ್ಗಳನ್ನು ತೆಗೆಯುವುದು ಮತ್ತು ಹೆಲ್ಮೆಟ್ಗಳನ್ನು ಹಾಕದೇ ಇರುವುದು ಕೂಡ ಅಪಘಾತಗಳಿಗೆ ಕಾರಣ ಎಂದಿದೆ ವರದಿ. ಹೆಚ್ಚುವರಿಯಾಗಿ, ರಾತ್ರಿ 9 ರಿಂದ ಬೆಳಗ್ಗೆ 6 ರ ನಡುವೆ ಪ್ರತಿ ವರ್ಷ ಅತ್ಯಧಿಕ ಸಂಖ್ಯೆಯ ಮಾರಣಾಂತಿಕ ಅಪಘಾತಗಳು ನಡೆದಿವೆ. ಕಳೆದ ವರ್ಷ ಇಂತಹ ಅಪಘಾತಗಳ ಸಂಖ್ಯೆಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6 ರವರ ಸಮಯದಲ್ಲಿ ಹೆಚ್ಚಳವಾಗಿದೆ. 2022 ಕ್ಕೆ ಹೋಲಿಸಿದರೆ, ಈ ಅವಧಿಯಲ್ಲಿ ಅಪಘಾತಗಳು 48% ಹೆಚ್ಚಾಗಿದೆ ಎನ್ನುವ ಆತಂಕಾರಿ ವರದಿ ಭಹಿರಂಗವಾಗಿದೆ.
Publisher: ಕನ್ನಡ ನಾಡು | Kannada Naadu